ನಾಯಿಗಳ ಕಚ್ಚಾಟ ನೋಡಿದಿರಾ???
ಒಂದೆಡೆ ಬಾಂಬು ಬ್ಲಾಸ್ಟು
ಕೆಲವೊಂದು ಎಗರಾಡುತಿವೆ ಕೊಡಲು
ಕಹಾನೀಲಿ ಟ್ವಿಸ್ಟು
ಮತ್ತೊಂದು ಮಗದೊಂದಕ್ಕೆ ಹೇಳುತಿದೆ
ಗೆಟ್ಟು ಲಾಸ್ಟು
ಈ ನಾಯಿಗಳ ಹಾರಾಟ, ಚೀರಾಟ
ಪರಸ್ಪರ ಕೆಸರೆರೆಚಾಟ, ಇರಬೇಕು
ಇದೇ ಅವಕ್ಕೆ ಚಿನ್ನಾಟ
ಇವುಗಳ ಹುಟ್ಟಡಗಿಸಲು,
ಹಚಾ ತೊಲಗಾಚೆ ನಾಯಿಗಳಾ
ಎನ್ನಬೇಕಾದ ಮಾಧ್ಯಮಗಳೋ
ಅಬ್ಬಾ!! ಒಂದು ನಾಯಿಯ ಮೇಲೆ
ಮತ್ತೊಂದನ್ನು ಛೂ ಬಿಟ್ಟು
ಬಡಿದಾಡುತ್ತಿವೆ ಟಿ.ಆರ್.ಪಿ
ಎಂಬ ಕಕ್ಕ ಬಾಚಲು
ಗುರ್ರೆಂದು, ಕಡಿದಾಡಿ, ಮೂಸಿ
ಬಾಲ ಅಲ್ಲಾಡಿಸಿ, ತಿಪ್ಪೆಯ ಹಳಸಲು
ತಿಂದು ಹೂಸಿ, ಮುಸಿ ಮುಸಿ
ಒಳಗೊಳಗೇ ನಗುತ್ತಿವೆ, ಹೇಳುತ್ತಿವೆ
ಓಟು ಹಾಕುವ ಪೆದ್ದಗಳಿರಾ...
ನಾವು ನಾಯಿಗಳೆಲ್ಲಾ ಒಂದು ಎಂದು
ಯಾವುದು ಜೂಲು ನಾಯಿ,
ಮತ್ಯಾವುದು ಕಂತ್ರಿ ನಾಯಿ
ಎಲೆಕ್ಷನ್ನು ಹತ್ತಿರವಿರಲು
ಎಲ್ಲಾ ನಾಯಿಗಳದೂ ಒಂದೇ
ತೆರನಾದ ಕಿರಿಕಿರಿಯಾಗುವ
ಹಲ್ಕಿರಿದ ಹಾವಭಾವ
ನಾಯಿಗಳ ಕಚ್ಚಾಟ ನೋಡಿದಿರಾ???
ಬಿಡದಿರಿ ನಾಯಿಗಳ ನಿಮ್ಮ ಮನೆ ಮುಂದೆ
ಅವು ನೆಕ್ಕುವವು ನಿಮ್ಮ ಪಾದ
ಮಲಗಲೂ ರೆಡಿ ಚಪ್ಪಲಿ ಗೂಡಿನಲಿ
ನಿರಪಾಯಕಾರಿ ನಾಯಿಗಳವು
ಎಲೆಕ್ಷನ್ ಮುಗಿಯೋವರೆಗೂ,
ಕೃತ್ರಿಮ ಮಂದಹಾಸಕ್ಕೆ ಬಲಿಯಾಗದಿರಿ
ಜನಗಳೇ, ಇದು ನಿಮ್ಮ ಸೇಡು ತೀರುವ
ಸಮಯ ಎಚ್ಚೆತ್ತುಕೊಳ್ಳಿ
ಒಂದೆಡೆ ಬಾಂಬು ಬ್ಲಾಸ್ಟು
ಕೆಲವೊಂದು ಎಗರಾಡುತಿವೆ ಕೊಡಲು
ಕಹಾನೀಲಿ ಟ್ವಿಸ್ಟು
ಮತ್ತೊಂದು ಮಗದೊಂದಕ್ಕೆ ಹೇಳುತಿದೆ
ಗೆಟ್ಟು ಲಾಸ್ಟು
ಈ ನಾಯಿಗಳ ಹಾರಾಟ, ಚೀರಾಟ
ಪರಸ್ಪರ ಕೆಸರೆರೆಚಾಟ, ಇರಬೇಕು
ಇದೇ ಅವಕ್ಕೆ ಚಿನ್ನಾಟ
ಇವುಗಳ ಹುಟ್ಟಡಗಿಸಲು,
ಹಚಾ ತೊಲಗಾಚೆ ನಾಯಿಗಳಾ
ಎನ್ನಬೇಕಾದ ಮಾಧ್ಯಮಗಳೋ
ಅಬ್ಬಾ!! ಒಂದು ನಾಯಿಯ ಮೇಲೆ
ಮತ್ತೊಂದನ್ನು ಛೂ ಬಿಟ್ಟು
ಬಡಿದಾಡುತ್ತಿವೆ ಟಿ.ಆರ್.ಪಿ
ಎಂಬ ಕಕ್ಕ ಬಾಚಲು
ಗುರ್ರೆಂದು, ಕಡಿದಾಡಿ, ಮೂಸಿ
ಬಾಲ ಅಲ್ಲಾಡಿಸಿ, ತಿಪ್ಪೆಯ ಹಳಸಲು
ತಿಂದು ಹೂಸಿ, ಮುಸಿ ಮುಸಿ
ಒಳಗೊಳಗೇ ನಗುತ್ತಿವೆ, ಹೇಳುತ್ತಿವೆ
ಓಟು ಹಾಕುವ ಪೆದ್ದಗಳಿರಾ...
ನಾವು ನಾಯಿಗಳೆಲ್ಲಾ ಒಂದು ಎಂದು
ಯಾವುದು ಜೂಲು ನಾಯಿ,
ಮತ್ಯಾವುದು ಕಂತ್ರಿ ನಾಯಿ
ಎಲೆಕ್ಷನ್ನು ಹತ್ತಿರವಿರಲು
ಎಲ್ಲಾ ನಾಯಿಗಳದೂ ಒಂದೇ
ತೆರನಾದ ಕಿರಿಕಿರಿಯಾಗುವ
ಹಲ್ಕಿರಿದ ಹಾವಭಾವ
ನಾಯಿಗಳ ಕಚ್ಚಾಟ ನೋಡಿದಿರಾ???
ಬಿಡದಿರಿ ನಾಯಿಗಳ ನಿಮ್ಮ ಮನೆ ಮುಂದೆ
ಅವು ನೆಕ್ಕುವವು ನಿಮ್ಮ ಪಾದ
ಮಲಗಲೂ ರೆಡಿ ಚಪ್ಪಲಿ ಗೂಡಿನಲಿ
ನಿರಪಾಯಕಾರಿ ನಾಯಿಗಳವು
ಎಲೆಕ್ಷನ್ ಮುಗಿಯೋವರೆಗೂ,
ಕೃತ್ರಿಮ ಮಂದಹಾಸಕ್ಕೆ ಬಲಿಯಾಗದಿರಿ
ಜನಗಳೇ, ಇದು ನಿಮ್ಮ ಸೇಡು ತೀರುವ
ಸಮಯ ಎಚ್ಚೆತ್ತುಕೊಳ್ಳಿ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ