ಬುಧವಾರ, ಏಪ್ರಿಲ್ 10, 2013

ಉಗಾದಿ ಹಾಡೂ ಪಾಡೂ

ಎಲ್ರೂ ಬನ್ನಿ, ಸ್ವಲ್ಪ ತಿನ್ನಿ
ಬೇವು ಬೆಲ್ಲ ನೀವೂನೂ
ಉಗಾದಿ ಅಂದ್ರೆ ನಮ್ಗೋಳ್ ಹಬ್ಬ
ವಿಸೇಸ ಅಲ್ವೇ ನಿಮ್ಗೂನು

ಎಣ್ಣೆ ಜೊತ್ಗೆ ಬೇವಿನೆಲೆ ಹಾಕಿ
ಚರ್ಮ ಹೊಳೆಯಂಗ್ ಮೈಗೆ ತಿಕ್ಕಿ
ಸ್ವಲ್ಪೊತ್ತು ಬಿಸ್ಲಾಗ್ ನಿಂತ್ಗಂಡ್
ಬಿಸಿ ನೀರನ್ನಾ ಚೊಂಬ್ಲಿ ಹುಯ್ಕೊಂಡ್

ಹಕ್ಕೊಳ್ರಪ್ಪಾ ಹೊಸ ಬಟ್ಟೆ
ಹೋಳಿಗೆ ತುಪ್ಪಾ ತುಂಬಿದೆ ತಟ್ಟೆ
ಸೀಕರಿಣಿ ಇದ್ರಂತು ಮುಗ್ದೇ ಹೋಯ್ತು
ಕೋಸಂಬ್ರಿ, ಸಂಡ್ಗೆ ಜೊತ್ಗೆ ಇಳಸ್ರಿ ತುತ್ತು

ಚಿಲ್ರೆ ಕಾಸಲ್ ಜೂಜಾಡಿ
ಸೋತ್ರೆ ತಲೆ ತಗ್ಗಿಸಬ್ಯಾಡ್ರಿ
ವರ್ಸಕ್ಕೊಮ್ಮೆ ಬರೋದಲ್ವೆ ಹೊಸ ವರ್ಷ
ಇರ್ಲಿ ನಮ್ಗು ನಿಮ್ಗೂನು ದಿನಾ ಹರ್ಷ

ಸಂಜಿ ಆದೇಟ್ಗೆ ಹತ್ರಿ ಮಾಳಿಗೆ
ಹುಡ್ಕಿ ಕೈ ಮುಗೀರಿ ಚಂದ್ರಂಗೆ
ಕಷ್ಟ ಸುಖ ಅಂದ್ರೆ ಇದ್ದಂಗ್ ಬೇವು ಬೆಲ್ಲ
ಎರಡೂ ಇದ್ರೆ ನಮ್ಗೋಳ್ ಬಾಳು ರಸ್ಗುಲ್ಲಾ
 

ಕಾಮೆಂಟ್‌ಗಳಿಲ್ಲ: